ಪ್ರಶಸ್ತಿ

ದಿನಾಂಕ: 26.01.2024ರ ಇಂದು 2024ರ ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯ ರಾಷ್ಟೀಯ ಸೇವಾ ಯೋಜನೆಯ ತಂಡವು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪಥಸಂಚಲನದಲ್ಲಿ ಭಾಗವಹಿಸಿ, ಯಶಸ್ವಿಯಾಗಿ ದ್ವಿತೀಯ ಸ್ಥಾನ ಪಡೆಯಿತು. ಕೃಷಿ ವಿಶ್ವ ವಿದ್ಯಾಲಯದ ಕುಲಪತಿಗಳು, ರಾಜ್ಯ ಎನ್ ಎಸ್ ಎಸ್ ಅಧಿಕಾರಿಗಳಾದ ಡಾ. ಪ್ರತಾಪ್ ಲಿಂಗಯ್ಯ ರವರು, ಎನ್ ಎಸ್ ಎಸ್ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಡಿ. ಕಾರ್ತಿಗೇಯನ್ ರವರು ಹಾಗೂ ಕೃಷಿ ವಿಶ್ವ ವಿದ್ಯಾಲಯದ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ಮಂಜುನಾಥ ರವರು ಸಮ್ಮುಖದಲ್ಲಿ ಎನ್ ಎಸ್ ಎಸ್ ಗಣರಾಜ್ಯೋತ್ಸವ ಪಥ ಸಂಚಲನ ತಂಡ ಬಹುಮಾನ ಸ್ವೀಕಾರ ಮಾಡಿತು.

NSS STATE AWARD CEREMONY 2021-22

2021-22ನೇ ಸಾಲಿನ ಎನ್. ಎಸ್. ಎಸ್. ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ:11.10.2023ರ ಇಂದು ಬೆ.11.00 ಘಂಟೆಯಿಂದ ರಾಜಭವನದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಯಿತು. ಸದರಿ ಪ್ರಶಸ್ತಿ ಸಮಾರಂಭವನ್ನು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌ ರವರು, ಕರ್ನಾಟಕ ಸರ್ಕಾರ, ಮಾನ್ಯ ಪರಿಶಿಷ್ಠ ಪಂಗಡಗಳು ಕಲ್ಯಾಣ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಶ್ರೀ ಬಿ. ನಾಗೇಂದ್ರ ರವರು, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಡಾ . ಕೆ. ಗೋವಿಂದರಾಜು ರವರು , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ಪ್ರಸಾದ್‌ ಭಾ.ಆ.ಸೇ., ರಾಜ್ಯ ಎನ್.‌ ಎಸ್.‌ ಎಸ್.‌ ಅಧಿಕಾರಿಗಳಾದ ಡಾ. ಪ್ರತಾಪ್‌ ಲಿಂಗಯ್ಯನವರು ಹಾಗೂ ಎನ್.‌ ಎಸ್.‌ ಎಸ್.‌ ಪಾದೇಶಿಕ ಕಛೇರಿ, ಬೆಂಗಳೂರು ನಿರ್ದೇಶಕರಾದ ಶ್ರೀ. ಡಿ. ಕಾರ್ತಿಗೇಯನ್‌ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಮಹತ್ವದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.

RD Parade
State Republic day parade 2022 — 2022-03-07

NSS Annual Report
NSS Annual Report 2022 Release by Secretary , Ministry of Youth Affairs and sports — 2022-03-07

ಪ್ರಶಸ್ತಿ ಪ್ರದಾನ ಸಮಾರಂಭ
2017-18, 2018-19 ಮತ್ತು 2019-20ನೇ ರಾಜ್ಯ ಎನ್.ಎಸ್.ಎಸ್.‌ ಪ್ರಶಸ್ತಿ ಪ್ರದಾನ ಸಮಾರಂಭ — 2022-01-29

State NSS Awards
State NSS Awards — 2021-06-01

State Republic Day Parade Camp
State Republic Day Parade Camp — 2019-01-26